NAVIKA First World Conference 2010
       
 
PHOTOS & VIDEOS
 
 
Follow Us
 
 
 
Literary Forum

Navika Literary Team Presents..,

Kavyadhare – A first of its kind program to kick off the First NAVIKA convention on Friday night.

A video conference between the eminent writers/poets from India and local writers/poets in US.

  • Dr. U.R. Anantha Murthy, Dr. Chndrasekhara Kambara and Prof. Siddalingaiah from Bangalore, India
  • Sukumar, Jyothi Mahadev, Alamelu Iyengar, Dr. Kumbhasi Srinivasa Bhat & Savitha Ravishankar from Los Angeles, USA
  • Coordinators : B.S. Raghuram (Bangalore) Dattathri Ramanna (LA)

Literary Workshop – An important workshop with lots of tips and ideas on how to write for news papers and magazines. Vijaya Karnataka editor Vishveshwara Bhat and Thatskannada editor Sham Sundar will conduct this workshop. Mr. Srivatsa Joshi will coordinate this program. Advance registration is REQUIRED. You don’t want to miss this unique opportunity!

Literature & Light music – By H.R. Leelavathi, a popular radio artist from yester-years

Honoring local writers

Book Release - by local writers.

Key Note speech by invited guest writers from India.

Ramayana – Artistic display of Ramayana story through the media of dolls.

Vibrant creative scenes using handmade dolls and ethnic art showcasing the story of Ramayana.

Ramayana quiz - For children/youth - age 6-11 and 12-18

ಅಮೇರಿಕಾ ಕನ್ನಡ ಸಾಹಿತ್ಯ ಪ್ರೇಮಿಗಳಿಗೆ ಸುಗ್ಗಿ

ನಾವಿಕ ಕನ್ನಡ ಸಂಸ್ಥೆಯ ಆಶ್ರಯದಲ್ಲಿ ಜುಲೈ ೨,೩ ಮತ್ತು ೪ ರಂದು ಅಮೇರಿಕಾದ ಲಾಸ್ ಅಂಜಲೀಸ್ ನಗರದಲ್ಲಿ ನೆಡೆಯಲಿರುವ ಪ್ರಪ್ರಥಮ ಶಿಖರ ಸಮಾವೇಶದಲ್ಲಿ ಸಾಹಿತ್ಯ ಸಮಿತಿಯವತಿಯಿಂದ ಹಲವಾರು ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿದೆ.

ವೀಡಿಯೋ ಕಾನ್ಫ಼ೆರೆನ್ಸ್ - ಕಾವ್ಯಧಾರೆ

ಕನ್ನಡ ಸಾಹಿತ್ಯದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ವೀಡಿಯೋ ಕಾನ್ಫ಼ೆರೆನ್ಸ್ ಮೂಲಕ ’ಕಾವ್ಯಧಾರೆ’ ಎಂಬ ವಿನೂತನ ಕಾರ್ಯಕ್ರಮವನ್ನು ಯೋಜಿಸಿದ್ದೇವೆ. ಖ್ಯಾತ ಸಾಹಿತಿಗಳಾದ ಡಾ|| ಅನಂತ ಮೂರ್ತಿ, ಡಾ|| ಚಂದ್ರಶೇಖರ ಕಂಬಾರ, ಪ್ರೊ|| ಸಿದ್ದಲಿಂಗಯ್ಯ ಅವರು ಬೆಂಗಳೂರಿನಿಂದಲೂ, ಶ್ರೀ ಸುಕುಮಾರ್, ಶ್ರೀಮತಿ ಜ್ಯೋತಿ ಮಹಾದೇವ, ಶ್ರೀಮತಿ ಅಲಮೇಲು ಐಯಂಗಾರ್, ಶ್ರೀಮತಿ ಸವಿತಾ ರವಿಶಂಕರ್ ಮತ್ತು ಡಾ|| ಕುಂಭಾಸಿ ಶ್ರೀನಿವಾಸ ಭಟ್ ಅವರು ಲಾಸ್ ಏಂಜಲೀಸ್ ನಗರದಿಂದ ಭಾಗವಹಿಸಲಿದ್ದಾರೆ.

ಕಾರ್ಯಾಗಾರ - ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುವುದು ಹೇಗೆ?

ವಿಜಯ ಕರ್ನಾಟಕ ಪತ್ರಿಕೆಯ ಸಂಪಾದಕರಾದ ಶ್ರೀ ವಿಶ್ವೇಶ್ವರ ಭಟ್ ಮತ್ತು ದಟ್ಸ್ ಕನ್ನಡ ಇ-ಪತ್ರಿಕೆಯ ಸಂಪಾದಕರಾದ ಶ್ರೀ ಶಾಮ ಸುಂದರ್ ಅವರಿಂದ ನೆಡಸಲ್ಪಡುವ ಈ ಕಾರ್ಯಾಗಾರವು ಅಮೇರಿಕನ್ನಡಗರಿಗೆ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುವ ವಿಧಾನಗಳ ಬಗ್ಗೆ ಅನೇಕ ಮಾಹಿತಿಗಳನ್ನು ನೀಡಲಿದೆ. ಶ್ರೀ ಶ್ರೀವತ್ಸ ಜೋಷಿಯವರು ಈ ಕಾರ್ಯಕ್ರಮವನ್ನು ನೆಡೆಸಿಕೊಡಲಿದ್ದಾರೆ.

ಸಾಹಿತ್ಯ ಮತ್ತು ಸುಗಮ ಸಂಗೀತ

ಕನ್ನಡದ ಖ್ಯಾತ ರೇಡಿಯೊ ಕಲಾವಿದೆ ಶ್ರೀಮತಿ ಎಚ್. ಆರ್. ಲೀಲಾವತಿ ಯವರಿಂದ ಸಾಹಿತ್ಯ ಮತ್ತು ಸುಗಮ ಸಂಗಿತದ ಬಗ್ಗೆ ವಿಚಾರ ಧಾರೆ.

ರಾಮಾಯಣ ಬೊಂಬೆ ಪ್ರದರ್ಶನ

ಭಾರತೀಯ ಮೌಲ್ಯಗಳ ಪ್ರತೀಕವಾದ ಹಾಗೂ ಸಾಹಿತ್ಯಿಕವಾಗಿ ಮೂಲ ಕೃತಿಯಾದ ಶ್ರೀ ರಮಾಯಣದ ರಸವತ್ತಾದ ಸನ್ನಿವೇಶಗಳನ್ನು ಬೊಂಬೆಗಳ ಮೂಲಕ ಸಾಹಿತ್ಯ ಸಮಿತಿಯ ಆಶ್ರಯದಿಂದ ಪ್ರದರ್ಶಿಸಲಾಗುವುದು. ರಾಮಾಯಣವನ್ನು ಕುರಿತು ಮಕ್ಕಳಿಗಾಗಿ ವಿಶೇಷವಾದ ’ರಸಪ್ರಶ್ನೆ’ ಸ್ಪರ್ಧೆಯನ್ನು ನೆಡೆಸಲಾಗುವುದು.

ಇಷ್ಟೇ ಅಲ್ಲದೆ, ಹೊಸ ಪುಸ್ತಕಗಳ ಬಿಡುಗಡೆ, ಅಮೇರಿಕಾದ ಕವಿಗಳ ಸನ್ಮಾನ, ಚರ್ಚೆ, ಸಂವಾದ ಗಳನ್ನು ಸಾಹಿತ್ಯ ಸಮಿತಿಯಿಂದ ನೆಡೆಸಲಾಗುವುದು.

ದಯವಿಟ್ಟು ಈ ಅವಕಾಶವನ್ನು ಕಳೆದುಕೊಳ್ಳಬೇಡಿ. ಎಲ್ಲಾ ಕಾರ್ಯಕ್ರಮಗಳಲ್ಲೂ ಭಾಗವಹಿಸಿ ಆನಂದಿಸಿ.

ನಾವಿಕ ಸಾಹಿತ್ಯ ಸಮಿತಿ.

 

 
 
 
 



 © 2010 NAVIKA2010.ORG   |   Terms of Use  |  Privacy Policy e baraha